Wednesday 27 November 2013

Dasana maadiko enna swamee

ದಾಸನ ಮಾಡಿಕೋ ಎನ್ನ  ಸ್ವಾಮೀ । ಸಾಸಿರ ನಾಮದ ವೆಂಕಟರಮಣಾ ।।ಪಲ್ಲ॥
ದುರ್ಬುಧ್ಧಿಗಳನೆಲ್ಲ ಬಿಡಿಸೋ । ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ ।।
ಚರಣ ಸೇವೆ ಎನಗೆ ಕೊಡಿಸೋ ಅಭಯಕರ ಪುಷ್ಪವನೆನ್ನ ಶಿರದಲಿ ಮುಡಿಸೋ ।।೧।।
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ । ನಡಿಗೆರಗುವೆನಯ್ಯಾ ಅನುದಿನ  ಪಾಡಿ ।।
ಕಡೆಗಣ್ಣ ಲೇಕೆನ್ನ  ನೋಡಿ ಬಿಡುವೆ । ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ  ।।೨।।
ಮೊರೆಹೊಕ್ಕವರ ಕಾವ ಬಿರುದು ಪೊತ್ತವ ಎನ್ನ ಮರೆಯದೇ ರಕ್ಷಿಸಯ್ಯಾ ಪೊರೆದು ।।೩।।
 ದುರಿತಗಳೆಲ್ಲವ ತರಿದು ಸಿರಿ ಪುರಂದರ ವಿಠ್ಠ ಲ  ಎನನ್ನು ಪೊರೆದು ।।೪।।


taarakka bindigeya naaa neerighOguve taare biMdigeya

ತಾರಕ್ಕ ಬಿಂದಿಗೆಯ ನಾ ನೀರಿಗ್ಹೋಗುವೆ  ತಾರೆ ಬಿಂದಿಗೆಯ ॥ ಬಿಂದಿಗೆಯೊಡೆದರೆ ಒಂದೇ ಕಾಸು ತಾರೆ ಬಿಂದಿಗೆಯ ॥ಪ॥
ರಾಮ ನಾಮವೆಂಬೋ ರಸವುಳ್ಳ ನೀರಿಗೆ ತಾರೆ ಬಿಂದಿಗೆಯ ॥ ಕಾಮಿನಿಯರ ಕೂಡ ಏಕಾಂತ ವಾಡೇನು ತಾರೆ ಬಿಂದಿಗೆಯ ॥ ೧॥
ಗೋವಿಂದ ಎಂಬೋ ಗುಣವುಳ್ಳ  ನೀರಿಗೆ ತಾರೆ ಬಿಂದಿಗೆಯ।। ಆವಾದ ಪರಿಯಲ್ಲಿ ಅಮೃತದ ಪಾನಕ್ಕ ತಾರೆ ಬಿಂದಿಗೆಯ ॥ ೨॥ ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೆ ಬಿಂದಿಗೆಯ ॥ ಪುರಂದರ ವಿಠಲಗೆ  ಅಭಿಷೇಕ ಮಾಡುವೆ ತಾರೆ ಬಿಂದಿಗೆಯ ॥ 

innoo daya baarade daasana mele innoo daya baarade

ಇನ್ನೂ ದಯಬಾರದೆ ದಾಸನ ಮೇಲೆ ಇನ್ನೂ ದಯಾ ಬಾರದೆ  ॥ ಪ॥
ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ ॥ ಅ ಪ ॥
ನಾನಾ ದೇಶಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ ನಾನು ನನ್ನನ್ನು ಎಂಬ ನರಕದೊಳು ಬಿದ್ದು ನೀನೆ ಗತಿಯೆಂದು ನಂಬಿದ ದಾಸನ ಮೇಲೆ ॥೧ ॥
ಕಾಮಾದಿ ಷಡ್ವರ್ಗ  ಗಾಡಾಂಧಕಾರದಿ ಪಾಮರನಾಗಿ ಪಾತಕಿಯು।  ಮಾಮನೋಹರನೆ ಚಿತ್ತ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ ॥ ೨ ॥
ಮಾನಸ ವಾಚ ಕಾಯಾದಿ  ಮಾಳ್ಪ ಕರ್ಮವು। ದಾನ ವಾಂತಕ ನಿನ್ನ ದೀನ ನಲ್ತೆ  । ಏನು ಮಾಡಿದರೇನು ಪ್ರಾಣ  ನಿನ್ನನು ಸ್ವಾಮೀ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ ॥ ೩ ॥ 

Friday 12 April 2013

smarane onde saalade govindana naama onde saalade

        ಸ್ಮರಣೆ ಒಂದೇ ಸಾಲದೇ  ಗೋವಿಂದನ ನಾಮ ಒಂದೇ ಸಾಲದೇ 

ಸ್ಮರಣೆ ಒಂದೇ ಸಾಲದೇ ಗೋವಿಂದನ ನಾಮ ಒಂದೇ ಸಾಲದೇ ॥ಪ॥ 
Smarane onde saalade govindana naama onde saalade ||pa||
ಪರಮ ಪುರುಷನನ್ನು ನೆರೆ ನಂಬಿದವಗೆ ದುರಿತ ಬಾಧೆಗಳ ಗುರುತು ತೋರುವುದೇ ॥ 
parama purshanannu nere nambidavage durita baadhegala gurutu toruvude ||
ಕಡು ಮೋರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು ಜಡವಾದರೇನಲ್ಪ ಜಾತಿಯಾದರೇನು  ಬಿಡದೆ 
kadu moorkhanaadarenu dushkarmadim todedaatanaadarenu jadavadarenalpajaatiyaadarenu bidade
ಪ್ರಹ್ಲಾದನ ಸಲುಹಿದ ಹರಿಯ ॥ ೧ ॥ ಪಾತಕಿಯಾದರೇನು ಸರ್ವ ಪ್ರಾಣಿ ಘ್ಹಾತಕಿಯಾದರೇನು ನೀತಿಯ ಬಿಟ್ಟು 
prahlaadana saluhida hariya ||1|| paatakiyaadarenu sarva praani ghaatakiyaadarenu neetiya bittu
ದುಷ್ಖರ್ಮಿಯಾದರೇನು ? ಪ್ರೀತಿಯಿಂದ ಜಾಮಿಳನ ಸಲುಹಿದ ಹರಿಯ ॥ ೨ ॥  ಸಕಲ ತೀರ್ಥಯಾತ್ರೆಯ ಮಾಡಿದಂಥ ಅಖಿಲ 
duShkarmiyaadarenu/ preetiyindajaamilana saluhida hariya || 2|| sakala teerthayaatreya maadidantha akhila|
ಪುಣ್ಯದ ಫಲವು ಭಕುತಿ ಪೂರ್ವಕವಾಗಿ ಬಿಡನುದಿನ ದಲ್ಲಿ ಪ್ರಕಟ ಪುರಂದರ ವಿಠಲನಾ ನಾಮದ ॥೩ ॥ 
punyada phalavu bhakuti poorvakavaagi bidanudinadalli prakata purandara vithalanaanaamada ||2||

Wednesday 3 April 2013

Deva bandaa namma swami bandaa

ದೇವ ಬಂದಾ ನಮ್ಮ ಸ್ವಾಮಿ  ಬಂದಾ  ದೇವರ ದೇವ ಶಿಖಾಮಣಿ ಬಂದನೋ ॥ ಪಲ್ಲ ॥
Deva bandaa namma swaami bandaa devara deva shikhaamani bandano
ಉರಗ ಶಯನ ಬಂದಾ ಗರುಡ ಗಮನ ಬಂದಾ ॥ ನರಗೊಲಿದವ ಬಂದಾ  ನಾರಾಯಣ ಬಂದಾ    ॥ 1  ॥
uraga shayana bandaa garuda gamana bandaa naragolidava bandaa naaraayana bandaa
ಮಂದರೋದ್ಧಾರ ಬಂದಾ ಮಾಮನೋಹರ ಬಂದಾ ವೃಂದಾವನ ಪತಿ  ಬಂದಾ  ಗೋವಿಂದ ಬಂದಾ  ॥ ೨ ॥
mandaroddhaara  bandaa maamanohara bandaa vrundavana pati bandaa govinda bandaa
ಪೂತನಿ ಸಂಹರಣ ಬಂದಾ ಪುರುಹೂತ ವಂದ್ಯ ಬಂದಾ ಮಾತುಳನ ಮಡುಹಿದ ಗೋವಿಂದ ಬಂದಾ ॥ ೩ ॥
pootani samharana bandaa puruhoota vandya bandaa maatalana maduhida govinda bandaa
ನಕ್ರಹರನು ಬಂದಾ ಚಕ್ರಧರನು ಬಂದಾ ಅಕ್ರೂರಗೊಲಿದ ಶ್ರೀ ವಿಕ್ರಮ ಬಂದನೋ ॥ ೪ ॥
nakraharanu bandaa chakradharanu bandaa akrooragolida shree vikrama bandano
ಪಕ್ಷಿ ವಾಹನ ಬಂದಾ ಲಕ್ಶ್ಮೀರಮಣ ಬಂದಾ ಅಕ್ಷಯ ಫಲದಾ ಲಕ್ಷ್ಮಣಾಗ್ರಜ ಬಂದಾ ॥ ೫ ॥
pakshi vaahana bandaa lakshmee ramana bandaa akshaya phaladaa lakshmanaagraja bandaa
ನಿಗಮಗೋಚರ ಬಂದಾ ನಿತ್ಯ ತೃಪ್ತನು ಬಂದಾ ನಗೆ ಮುಖದರಸ ಪುರಂದರ ವಿಠಲ ಬಂದಾ ॥ ೬ ॥
nigamagochara bandaa nitya truptanu bandaa nage mukha darasa purandara vithala bandaa


Wednesday 27 March 2013

naranaada mele harinaama jhweyoirabeku

ನರನಾದ ಮೇಲೆ ಹರಿನಾಮ ಜಿಹ್ವೆ ಯೊಳರಬೇಕು ॥ಪ ॥
Naranaada mele harinaama jihveyolirabeku ||p||

ಭೂತ ದಯಾಪರನಾಗಿರಬೇಕು ಪಾತಕವೆಲ್ಲ ಕಳೆಯಲು ಬೇಕು ಮಾತು ಮಾತಿಗೆ ಹರಿಯನ್ನಬೇಕು ॥ ೧ ॥
Bhoota dayaaparanaagirabeku paatakavella kaleyalu beku maatu maatige hariyennabeku ||1

ಆರು ವರ್ಗವ ನಳಿಯಬೇಕು ಮೂರು ಗಣಂ ಗಳ ಮೀರಲು ಬೇಕು ಸೇರಿ ಬ್ರಹ್ಮನೊಳಿ ರಬೇಕು ॥ ೨ ॥
aaru vargava naliyabeku mooru ganangala meeralu beku seli brahmanolirabeku ||

ಅಷ್ಟ ಮದಂಗಳ ತಿಳಿಯಲು ಬೇಕು ದುಷ್ಟರ ಸಂಗವ ಬಿಡಲುಬೇಕು ಕೃಷ್ಣಾ ಕೇಶವ ಎನ್ನ ಬೇಕು ॥ ೩ ॥
Ashta madangala tiliyalu beku dushtara sangava bidalu beku krishnaa keshava enna beku ||

ವೇದ ಶಾಸ್ತ್ರವನೋದಲು ಬೇಕು ಭೇದಹಂಕಾರವ ನೀಗಲು ಬೇಕು ಮಾಧವ ಸ್ಮರಣೆಯೊಳಿರಬೇಕು ॥ ೪ ॥
veda shaastrava nodalu beku bhedahankaarava neegalu beku maadhava smaraneyolirabeku ||4||

ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು ಭ್ರಾಂತಿ ಕ್ರೋಧವ ಕಳೆಯಲು ಬೇಕು ಸಂತರ ಸಂಗದಿ ರತಿಯಿರಬೇಕು ॥ ೫ ॥
shaanti khame daye pidiyalu beku bhraanti krodhava kaleyalu beku santara sangadi ratiyirabeku ||
5||
ಗುರುವಿನ ಚರಣಕ್ಕೆರಗಲು ಬೇಕು ತರುಣೋಪಾಯವನರಿಯಲು ಬೇಕು ವಿರಕ್ತಿ ಮಾರ್ಗದಲಿರಬೇಕು ॥ ೬ ॥
guruvina charanakkeragalu beku tarunopaayavanariyalu beku virakti maargadalirabeku ||6||

ಬಂದದ್ದುಂಡು  ಸುಖಿಸಲು ಬೇಕು ನಿನ್ದಾಸ್ತುತಿಗಳ ತಾಳಲು ಬೇಕು ತಂದೆ ಪುರಂದರ ವಿಠಲನ ನೆನೆಯಲುಬೇಕು ॥ ೭ ॥
Bandaddundu sukhisalu beku nindaastutigala taalalu beku tande purandara vithalana neneyalu beku ||7
||

Bide ninna paadava binkavideko

ಬಿಡೆ ನಿನ್ನ ಪಾದವ ಬಿಂಕವಿದೇಕೊ  ಕೊಡು ಮನದಿಷ್ಟವ ಕೋಪವಿದೇಕೊ ॥ಪಲ್ಲ॥
bide ninna paadava binkavideko kodu manadishtava kopavideko ||P||

ನೀರ ಹೊಕ್ಕರು ಬಿಡೆ ಬೆನ್ನಿನೊಳಗೆ ಬಹು ಭಾರ ಪೊತ್ತೆನೆಂದು ಬಿದ್ದರು ಬಿಡೆನು ।।
neera hokkaru bide benninolage bahu bhaara pottenend biddaru bidenu ||
ಕೋರೆಯ ಮಸೆಯುತ ಕೆಸರು ಕೊಂಡರು ಬಿಡೆನು ಘೋರ ರೂಪವ ತಾಳಿ ಘುರಿ ಘುರಿಸಲು ನಾನು   ॥ ೧॥
koreya maseyuta kesaru kondaru bidenu ghora roopava taali ghuri ghurisalu naanu || 1||

ತಿರುಕನೆಂದರು ಬಿಡೆ  ತಿಳಿದು ತಾಯ ಕೊರಳ ತರಿವನೆಂದರು ನಿನ್ನ ನಾ ಬಿಡೆನೋ ॥
tirukanendaru bide tilidu taaya korala tarivanendru ninna naa bideno ||
ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ ದುರುಳ ಮಡುವಿನಲ್ಲಿ ಧುಮಿಕಿದರೂ ನಾನು ॥2॥
poreeye pitana vaakya kaada seralu bide durula maduvinalli dhumikidaroo naanu ||2||

ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು ಬಿಡೆ ಒಡನೆ ಹಯವೇರಿ ಓದಿದರೂ ಬಿಡೆನು ॥3||
kadu battalaagi enna kaili kaasillendaru bide odane hayaveri oDidaroo bidenu ||

ಪೊಡವಿಯೊಳಗೆ ನಮ್ಮ ಪುರಂದರ ವಿಠಲನೆ  ಕಡೆ ಹಾಯಿಸುವ ಭಾರ ನಿನ್ನದಕೆ ನಾನು ॥4॥  
poDaviyoLage namma purandara vithalane kade haayisuva bhaara ninnadake naau

Sunday 24 March 2013

naa ninnolanya beduvudilla

ನಾ ನಿನ್ನೂಳನ್ಯ ಬೇಡುವುದಿಲ್ಲ  ಎನ್ನ ಹೃದಯ ಕಮಲದೊಳು ನಿಂದಿರು ಹರಿಯೇ ॥ಪಲ್ಲ॥
naa ninnolanya beduvudilla enna hridaya kamaladolu nindiru hariye
ಶಿರ ನಿನ್ನ ಚರಣಕೆರಗಲಿ ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೇ ॥
shira ninna charanakeragali enna chakshu sadaa ninna nodali hariye
ಕರ್ಣ ಗೀತಂಗಳ ಕೇಳಲಿ ನಿನ್ನ ನಿರ್ಮಾಲ್ಯ ನಾಶಿಕವಾಘ್ರಣಿಸಲಿ ಹರಿಯೇ ॥ ೧ ॥
karna geetangala kelali ninna nirmaalya naashikavaaghraanisali hariye
ನಾಲಿಗೆ ನಿನ್ನ ಕೊಂಡಾಡಲಿ  ಎನ್ನ  ಕರಗಳೆರಡು ನಿನ್ನನರ್ಚಿಸಲಿ ಹರಿಯೇ  ॥
naalige ninna kodaadali enna karagaleradu ninnanarchisali hariye
ಚರಣ ತೀರ್ಥಯಾತ್ರೆ ಮಾಡಲಿ ಎನ್ನ  ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೇ ॥ ೨॥
charana teerthayaate maadali enna mana anudina ninna smarisali hariye
ಬುದ್ಧಿ ನಿನ್ನೊಳು ಬೆರಥೋಗಲಿ ಎನ್ನ ಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೇ ॥
buddhi ninnolu berathogali enna chitta ninnolu sthiravaagali hariye
ಭಕ್ತ ಜನರ ಸಂಗವಾಗಲಿ ಪುರಂದರ ವಿಠ್ಠಲನೇ ಇಷ್ಟು  ದಯಮಾಡು ಹರಿಯೇ ||3||
bhakta janara sangavaagali purandara viththalane ishtu dayamaadu hariye



Saturday 23 March 2013

neenyaako ninna hangyaako

ನೀನ್ಯಾಕೋ ನಿನ್ನ ಹಂಗ್ಯಾಕೋ । ನಿನ್ನ ನಾಮದ ಬಲವೊಂದಿದ್ದರೆ ಸಾಕೋ ॥ಪಲ್ಲ॥
neenyaako ninna hangyaakoo | ninna naamada balavondiddare saako ||Pa||
ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ । ಆದಿ ಮೂಲವೆಂಬ ನಾಮವೇ ಕಾಯ್ತೋ ॥ ೧॥
kari makarige sikki moreyidutiruvaaga | aadi moolavemba naamave kaayto ||1||
ಪ್ರಹ್ಲಾದ ಪಿತ  ಭಾದಿಸುತಿರುವಾಗ । ನರಹರಿಯೆಂಬ ನಾಮವೇ ಕಾಯ್ತೋ ॥೨ ॥
prahlada pita bhaadisutirvaaga | narahariyamba naamave kaayto ||2||
ಸಭೆಯಲಿ ಬಾಲೆಯ ಸೀರೆಯ ಸೆಳೆದಾಗ । ಬಾಲಕೃಷ್ಣಾ ಎಂಬ ನಾಮವೇ ಕಾಯ್ತೋ ॥ ೩॥
sabheyali baaleya seereya seledaaga | baalakRuShnaa emba naamave kaayto ||3||





ಯಮನ ಧೂತರು ಬಂದು ಅಜಮಿಳನ  ನೆಳೆವಾಗ । ನಾರಾಯಣನೆಂಬ ನಾಮವೇ ಕಾಯ್ತೋ ॥ ೪॥
yamana dhootaru bandu ajamilana seledaaga | naaraayananemba naamave kaayto|| 4|| 


ಆ ಮರ ಈ ಮರ ಧ್ಯಾನಿಸುತಿರುವಾಗ । ರಾಮ ರಾಮವೆಂಬ ನಾಮವೇ ಕಾಯ್ತೋ ॥ ೫ ॥
aa mara ee mara dhyaanisutiruvaaga | raama raamavemba naamave kaayto |6||
ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ । ವಾಸುದೇವಾ ಎಂಬ ನಾಮವೇ ಕಾಯ್ತೋ ॥ ೬॥ 
hasule aa dhruva raaya adavige podaaga | vaasudevaa emba naamave kaayto ||6||
ನಿನ್ನ  ನಾಮಕೆ ಸರಿ ಕಾಣೆನು ಜಗದೊಳು । ಘನ ಮಹಿಮಾ ಶ್ರೀ ಪುರಂದರ ವಿಠ್ಥಲ॥ 
ninna naamake sari kaanenu jagadolu | ghana mahimaa shree purandara vithala ||

nageyu barutide enage nageyu barutide

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ॥ಪಲ್ಲ॥
nageyu barutide enage nageyu barutide 
ಜಗದೊಳಿರುವ ಮನುಜರೆಲ್ಲಾ ಹಗರಣ ಮಾಡುವುದ ಕಂಡು  ॥ ಅ.ಪ ॥
jagadoLiruva manujarellaa hagarana maaduvuda kandu
ಪರರ ವನಿತೆಯೊಳುಮೆಗೊಲಿದು ಹರುಷದಿಂದ ಅವಳ ಬೆರೆದು ॥ ಹರಿವ ನೀರಿನೊಳಗೆ ಮುಳುಗೆ ಬೆರಳ ಎಣಿಸುತಿಹರ ಕಂಡು।೧ ।
parara vaniteyolumegolidu harushadinda avala beredu || harida neerinolage mulage berala enisutihara kandu||
ಪತಿಯ ಸೇವೆ ಬಿಟ್ಟು ಪರ ಪತಿಯ ಕೊಡಿ ಸರಸವಾಡೆ ಸತತ ಮೈಯ ತೊಳೆದು ಹಲವು ವ್ರತವ ಮಾಳ್ಪ ಸತಿಯ ಕಂಡು ॥ ೨ ॥
patiya seve bittu para patiya koodi sarasavaade satata maiya toledu halavu vratava maalpa satiya kandu ||2||
ಕಾಮ ಕ್ರೋಧ ಮನದೊಳಿಟ್ಟು ತಾನು ವಿಷಯ ಲಂಪಟಾಗಿ ಸ್ವಾಮಿ  ಪುರಂದರ ವಿಠಲನ ನಾಮ ನೆನೆಯದವರ ಕಂಡು ॥ ೩॥
kaama krodha manadolittu taanu vishaya lampataagi swaami purandara vithalana naama neneyadavara kandu.||3||

Friday 22 March 2013

Dasana maadiko yenna


ದಾಸನ ಮಾಡಿಕೊ ಎನ್ನ ಸ್ವಾಮೀ । ಸಾಸಿರ ನಾಮದ ವೆಂಕಟರಮಣಾ ॥ಪಲ್ಲ॥
daasana maadiko enna swamee | saasira naamada venkataramanaa ||p||
ದುರ್ಬುದ್ಧಿಗಳನೆಲ್ಲ ಬಿಡಿಸೊ । ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ ॥
durbudhdhigalanella bidiso | ninna karuna kavachavenna haranakke todiso||
ಚರಣ ಸೇವೆ ಎನಗೆ ಕೊಡಿಸೋ ಅಭಯಕರ ಪುಷ್ಪವನೆನ್ನ ಶಿರದಲಿ ಮೂಡಿಸೋ ॥ ೧ ॥
charana seve enage kodiso abhayakara pushpavanenna shiradali mudiso
ಧೃಡ ಭಕ್ತಿ ನಿನ್ನಲ್ಲಿ ಬೇಡಿ ನಾ । ನಡಿಗೆರಗುವೆನಯ್ಯಾ ಅನುದಿನ ಪಾಡಿ ॥
Dhruda bhakti ninnalli bedi naa | nadigeraguvenayyaa anudina paadi ||

ಕಡೆಗಣ್ಣ ಲೇಕೆನ್ನ ನೋಡಿ ಬಿಡುವೆ । ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ॥ ೨ ॥
kadeganna lekenna nodi biduve | kodu ninna dhyanava mana shuchimaadi || 1 ||
ಮೊರೆಹೊಕ್ಕವರ  ಕಾವ ಬಿರುದು ಎನ್ನ । ಮರೆಯದೆ ರಕ್ಷಣೆ ಮಾಡಯ್ಯಾ ಪೊರೆದು ॥
morefokkavara kaava birudu enna | mareyade rakshane maadayyaa poredu||
 ದುರಿತಗಳೆಲ್ಲವ  ತರಿದು ಸಿರಿ ಪುರಂದರ ವಿಠ್ಠಲ ಎನ್ನನು ಪೊರೆದು ॥ ೩ ॥
duritagalellava taridu siri purandara vitthala ennanu poredu ||2 ||
 

Wednesday 20 March 2013

yaadava nee baa yadukula nandana

    ಯಾದವ ನೀ ಬಾ ಯದುಕುಲ ನಂದನ ಮಾಧವ ಮಧುಸೂದನ ಬಾರೋ ॥ ಸೋದರ ಮಾವನ ಮಧುರೆಲಿ ಮಡುಹಿದ ಯಶೋಧೆ ನಂದನ ನೀ ಬಾರೋ ॥ಪಲ್ಲ॥
yaadava nee baa yadukula nandana maadhava madhusudana baaro || sodara maavana madhureli maduhida yashodhe nandana nee baaro ||P||
ಶಂಖ ಚಕ್ರವು ಕೈಯಲ್ಲಿ ಹೊಳೆಸುತ ಬಿಂಕದ ಗೋಪಾಲ ನೀ ಬಾರೋ। ಅಕಳಂಕ ಮಹಿಮನೆ ಆದಿ ನಾರಾಯಣ । ಬೇಕೆಂಬ ಭಕ್ತರಿಗೊಲಿ ಬಾರೋ ॥ ೧ ॥
shankha chakravu kaiyali holeyuta binkada gopaala nee baro | akalanka mahimane aadi naaraayana| bekemba bhaktaragoli baaro ||1||

ಕಣಕಾಲಂದುಗೆ ಘುಲ ಘುಲುರೆನುತಲಿ  ಝಣ ಝಣ ವೇಣು ನಾದದಲಿ ॥ ಚಿಣಿಕೋಲು ಚೆಂಡು ಬುಗುರೆಯನಾಡುತ । ಸಣ್ಣ ಸಣ್ಣ ಗೋಪಾಲರೊಡಗೂಡಿ ನೀ ಬಾರೋ ॥ ೨ ॥
kanakaalanduge ghula ghulurenutali jhuna jhuna venu naadadali || chinikolu chendu bugureyanaaduta | sanna sanna gopaalarodagoodi nee baaro ||2||
ಖಗ ವಾಹನನೆ ಬಗೆ ಬಗೆ  ರೂಪದಿ । ನಗೆ ಮೊಗದರಸನೆ ನೀ ಬಾರೋ । ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರ ವಿಟ್ಠಲ ನೀ ಬಾರೋ ॥ ೩॥
khaga vaahanane bage bage roopadi | nage mogadarasane nee baaro |jagadolu ninnaya mahimeya pogaluve purandara vitthala nee baaro ||3||

gajavadana beduve gowree tanaya

ಗಜವದನ ಬೇಡುವೆ ಗೌರಿತನಯ ।   ತ್ರಿಜಗ ವಂದಿತನೆ ಸುಜನರ ಪೊರೆವನೆ ॥ಪ ॥
gajavadana beduve gowree tanaya | trijaga vanditane sujanara porevane || pa||
ಪಾಶಾಂಕುಶ ಧರ ಪರಮ ಪವಿತ್ರ । ಮೂಷಕ ವಾಹನ ಮುನಿಜನ ಪ್ರೇಮ ॥ ೧ ॥
paashaankusha dhara parama pavitra | mooshaka vaahana munijana prema ||1||
 ಮೋದದಿ ನಿನ್ನಯ ಪಾದವ ತೋರೋ। ಸಾಧು ವಂದಿತನೆ ಆದರದಿಂದಲಿ || ೨ ॥
modadi ninnaya paadava toro | saadhu vanditane aadaradindali ||2||
 ಸರಸಿಜನಾಭ ಶ್ರೀ ಪುರಂದರ ವಿಠ್ಠಲನ । ನಿರುತ ನೆನೆಯುವಂತೆ ದಯೆಮಾಡೋ ॥ ೩ ॥
sarasijanaabha shree purandara viththalana| niruta neneyuvante daye maado ||3||

Sharanu Siddhi Vinaayaka

ಶರಣು ಸಿದ್ಧಿ ವಿನಾಯಕ । ಶರಣು ವಿದ್ಯೆ ಪ್ರದಾಯಕ । ಶರಣು ಪಾರ್ವತಿತನಯ ಮೂರುತಿ ।ಶರಣು ಮೂಷಕ ವಾಹನಾ॥ ಶರಣು॥ಪ॥
Sharanu siddhi vinaayaka | sharanu vidye pradaayaka | sharanu paarvatitanaya mooruti | sharanu mooshaka vaahanaa || sharanu|| pa||
ನಿಟಿಲ ನೇತ್ರನ ದೇವಿ ಸುತನೆ ನಾಗಭೂಷಣ ಪ್ರಿಯನೆ। ತಟಿಲ ತಾಂಕಿತ ಕೋಮಲಾಂಗನೆ ಕರ್ಣ ಕುಂಡಲಧಾರನೆ ॥೧ ॥
Nitila netrana devi sutane naagabhooshana priyane |tatila taankita komalangane karna kundaka dhaarane ||1||
ಬಿಟ್ಟ ಮುತ್ತಿನ ಪದಕ ಹಾಸನೆ ಬಾಹು ಹಸ್ತ ಚತುಷ್ಕನೇ। ಇಟ್ಟ ತೊಡುಗೆಯ ಹೇಮಕಂಕಣ ಪಾಶ ಅಂಕುಶ ಧಾರನೆ॥೨॥  
bitta muttina padaka haasane baahu hasta chatushkane | itta todugeya hemakankana paasha ankusha daarane ||2||
ಕುಕ್ಷಿ ಮಹಾ ಲಂಬೋದರನೆ  ಇಕ್ಷು ಛಾಪನ ಗೆಲಿದನೆ। ಪಕ್ಷಿ ವಾಹನ ಸಿರಿ ಪುರಂದರ ವಿಠ್ಠಲನ ನಿಜದಾಸನೆ ॥೩॥ 
kukshi mahaa lambodarane ikshu chaapana gelidane | pakshi vaahana siri purandara viththalana nija daasane ||3||