Monday 15 March 2021

ಜಗದೋದ್ಧಾರನ ಆಡಿಸಿದಳೆಶೋದಾ

ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1) ಅಣೋರಣೀಯನ ಮಹತೋ ಮಹೀಯನ ಅಪ್ರಮೇಯನ ಆಡಿಸಿದಳೆಶೋದಾ (2) ಪರಮ ಪುರುಷನ ಪರವಾಸುದೇವನ ಪುರಂದರ ವಿಠ್ಠಲನ ಆಡಿಸಿದಳೆಶೋದೆ (3)

Wednesday 27 November 2013

Dasana maadiko enna swamee

ದಾಸನ ಮಾಡಿಕೋ ಎನ್ನ  ಸ್ವಾಮೀ । ಸಾಸಿರ ನಾಮದ ವೆಂಕಟರಮಣಾ ।।ಪಲ್ಲ॥
ದುರ್ಬುಧ್ಧಿಗಳನೆಲ್ಲ ಬಿಡಿಸೋ । ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ ।।
ಚರಣ ಸೇವೆ ಎನಗೆ ಕೊಡಿಸೋ ಅಭಯಕರ ಪುಷ್ಪವನೆನ್ನ ಶಿರದಲಿ ಮುಡಿಸೋ ।।೧।।
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ । ನಡಿಗೆರಗುವೆನಯ್ಯಾ ಅನುದಿನ  ಪಾಡಿ ।।
ಕಡೆಗಣ್ಣ ಲೇಕೆನ್ನ  ನೋಡಿ ಬಿಡುವೆ । ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ  ।।೨।।
ಮೊರೆಹೊಕ್ಕವರ ಕಾವ ಬಿರುದು ಪೊತ್ತವ ಎನ್ನ ಮರೆಯದೇ ರಕ್ಷಿಸಯ್ಯಾ ಪೊರೆದು ।।೩।।
 ದುರಿತಗಳೆಲ್ಲವ ತರಿದು ಸಿರಿ ಪುರಂದರ ವಿಠ್ಠ ಲ  ಎನನ್ನು ಪೊರೆದು ।।೪।।


taarakka bindigeya naaa neerighOguve taare biMdigeya

ತಾರಕ್ಕ ಬಿಂದಿಗೆಯ ನಾ ನೀರಿಗ್ಹೋಗುವೆ  ತಾರೆ ಬಿಂದಿಗೆಯ ॥ ಬಿಂದಿಗೆಯೊಡೆದರೆ ಒಂದೇ ಕಾಸು ತಾರೆ ಬಿಂದಿಗೆಯ ॥ಪ॥
ರಾಮ ನಾಮವೆಂಬೋ ರಸವುಳ್ಳ ನೀರಿಗೆ ತಾರೆ ಬಿಂದಿಗೆಯ ॥ ಕಾಮಿನಿಯರ ಕೂಡ ಏಕಾಂತ ವಾಡೇನು ತಾರೆ ಬಿಂದಿಗೆಯ ॥ ೧॥
ಗೋವಿಂದ ಎಂಬೋ ಗುಣವುಳ್ಳ  ನೀರಿಗೆ ತಾರೆ ಬಿಂದಿಗೆಯ।। ಆವಾದ ಪರಿಯಲ್ಲಿ ಅಮೃತದ ಪಾನಕ್ಕ ತಾರೆ ಬಿಂದಿಗೆಯ ॥ ೨॥ ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೆ ಬಿಂದಿಗೆಯ ॥ ಪುರಂದರ ವಿಠಲಗೆ  ಅಭಿಷೇಕ ಮಾಡುವೆ ತಾರೆ ಬಿಂದಿಗೆಯ ॥ 

innoo daya baarade daasana mele innoo daya baarade

ಇನ್ನೂ ದಯಬಾರದೆ ದಾಸನ ಮೇಲೆ ಇನ್ನೂ ದಯಾ ಬಾರದೆ  ॥ ಪ॥
ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ ॥ ಅ ಪ ॥
ನಾನಾ ದೇಶಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ ನಾನು ನನ್ನನ್ನು ಎಂಬ ನರಕದೊಳು ಬಿದ್ದು ನೀನೆ ಗತಿಯೆಂದು ನಂಬಿದ ದಾಸನ ಮೇಲೆ ॥೧ ॥
ಕಾಮಾದಿ ಷಡ್ವರ್ಗ  ಗಾಡಾಂಧಕಾರದಿ ಪಾಮರನಾಗಿ ಪಾತಕಿಯು।  ಮಾಮನೋಹರನೆ ಚಿತ್ತ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ ॥ ೨ ॥
ಮಾನಸ ವಾಚ ಕಾಯಾದಿ  ಮಾಳ್ಪ ಕರ್ಮವು। ದಾನ ವಾಂತಕ ನಿನ್ನ ದೀನ ನಲ್ತೆ  । ಏನು ಮಾಡಿದರೇನು ಪ್ರಾಣ  ನಿನ್ನನು ಸ್ವಾಮೀ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ ॥ ೩ ॥ 

Friday 12 April 2013

smarane onde saalade govindana naama onde saalade

        ಸ್ಮರಣೆ ಒಂದೇ ಸಾಲದೇ  ಗೋವಿಂದನ ನಾಮ ಒಂದೇ ಸಾಲದೇ 

ಸ್ಮರಣೆ ಒಂದೇ ಸಾಲದೇ ಗೋವಿಂದನ ನಾಮ ಒಂದೇ ಸಾಲದೇ ॥ಪ॥ 
Smarane onde saalade govindana naama onde saalade ||pa||
ಪರಮ ಪುರುಷನನ್ನು ನೆರೆ ನಂಬಿದವಗೆ ದುರಿತ ಬಾಧೆಗಳ ಗುರುತು ತೋರುವುದೇ ॥ 
parama purshanannu nere nambidavage durita baadhegala gurutu toruvude ||
ಕಡು ಮೋರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು ಜಡವಾದರೇನಲ್ಪ ಜಾತಿಯಾದರೇನು  ಬಿಡದೆ 
kadu moorkhanaadarenu dushkarmadim todedaatanaadarenu jadavadarenalpajaatiyaadarenu bidade
ಪ್ರಹ್ಲಾದನ ಸಲುಹಿದ ಹರಿಯ ॥ ೧ ॥ ಪಾತಕಿಯಾದರೇನು ಸರ್ವ ಪ್ರಾಣಿ ಘ್ಹಾತಕಿಯಾದರೇನು ನೀತಿಯ ಬಿಟ್ಟು 
prahlaadana saluhida hariya ||1|| paatakiyaadarenu sarva praani ghaatakiyaadarenu neetiya bittu
ದುಷ್ಖರ್ಮಿಯಾದರೇನು ? ಪ್ರೀತಿಯಿಂದ ಜಾಮಿಳನ ಸಲುಹಿದ ಹರಿಯ ॥ ೨ ॥  ಸಕಲ ತೀರ್ಥಯಾತ್ರೆಯ ಮಾಡಿದಂಥ ಅಖಿಲ 
duShkarmiyaadarenu/ preetiyindajaamilana saluhida hariya || 2|| sakala teerthayaatreya maadidantha akhila|
ಪುಣ್ಯದ ಫಲವು ಭಕುತಿ ಪೂರ್ವಕವಾಗಿ ಬಿಡನುದಿನ ದಲ್ಲಿ ಪ್ರಕಟ ಪುರಂದರ ವಿಠಲನಾ ನಾಮದ ॥೩ ॥ 
punyada phalavu bhakuti poorvakavaagi bidanudinadalli prakata purandara vithalanaanaamada ||2||

Wednesday 3 April 2013

Deva bandaa namma swami bandaa

ದೇವ ಬಂದಾ ನಮ್ಮ ಸ್ವಾಮಿ  ಬಂದಾ  ದೇವರ ದೇವ ಶಿಖಾಮಣಿ ಬಂದನೋ ॥ ಪಲ್ಲ ॥
Deva bandaa namma swaami bandaa devara deva shikhaamani bandano
ಉರಗ ಶಯನ ಬಂದಾ ಗರುಡ ಗಮನ ಬಂದಾ ॥ ನರಗೊಲಿದವ ಬಂದಾ  ನಾರಾಯಣ ಬಂದಾ    ॥ 1  ॥
uraga shayana bandaa garuda gamana bandaa naragolidava bandaa naaraayana bandaa
ಮಂದರೋದ್ಧಾರ ಬಂದಾ ಮಾಮನೋಹರ ಬಂದಾ ವೃಂದಾವನ ಪತಿ  ಬಂದಾ  ಗೋವಿಂದ ಬಂದಾ  ॥ ೨ ॥
mandaroddhaara  bandaa maamanohara bandaa vrundavana pati bandaa govinda bandaa
ಪೂತನಿ ಸಂಹರಣ ಬಂದಾ ಪುರುಹೂತ ವಂದ್ಯ ಬಂದಾ ಮಾತುಳನ ಮಡುಹಿದ ಗೋವಿಂದ ಬಂದಾ ॥ ೩ ॥
pootani samharana bandaa puruhoota vandya bandaa maatalana maduhida govinda bandaa
ನಕ್ರಹರನು ಬಂದಾ ಚಕ್ರಧರನು ಬಂದಾ ಅಕ್ರೂರಗೊಲಿದ ಶ್ರೀ ವಿಕ್ರಮ ಬಂದನೋ ॥ ೪ ॥
nakraharanu bandaa chakradharanu bandaa akrooragolida shree vikrama bandano
ಪಕ್ಷಿ ವಾಹನ ಬಂದಾ ಲಕ್ಶ್ಮೀರಮಣ ಬಂದಾ ಅಕ್ಷಯ ಫಲದಾ ಲಕ್ಷ್ಮಣಾಗ್ರಜ ಬಂದಾ ॥ ೫ ॥
pakshi vaahana bandaa lakshmee ramana bandaa akshaya phaladaa lakshmanaagraja bandaa
ನಿಗಮಗೋಚರ ಬಂದಾ ನಿತ್ಯ ತೃಪ್ತನು ಬಂದಾ ನಗೆ ಮುಖದರಸ ಪುರಂದರ ವಿಠಲ ಬಂದಾ ॥ ೬ ॥
nigamagochara bandaa nitya truptanu bandaa nage mukha darasa purandara vithala bandaa


Wednesday 27 March 2013

naranaada mele harinaama jhweyoirabeku

ನರನಾದ ಮೇಲೆ ಹರಿನಾಮ ಜಿಹ್ವೆ ಯೊಳರಬೇಕು ॥ಪ ॥
Naranaada mele harinaama jihveyolirabeku ||p||

ಭೂತ ದಯಾಪರನಾಗಿರಬೇಕು ಪಾತಕವೆಲ್ಲ ಕಳೆಯಲು ಬೇಕು ಮಾತು ಮಾತಿಗೆ ಹರಿಯನ್ನಬೇಕು ॥ ೧ ॥
Bhoota dayaaparanaagirabeku paatakavella kaleyalu beku maatu maatige hariyennabeku ||1

ಆರು ವರ್ಗವ ನಳಿಯಬೇಕು ಮೂರು ಗಣಂ ಗಳ ಮೀರಲು ಬೇಕು ಸೇರಿ ಬ್ರಹ್ಮನೊಳಿ ರಬೇಕು ॥ ೨ ॥
aaru vargava naliyabeku mooru ganangala meeralu beku seli brahmanolirabeku ||

ಅಷ್ಟ ಮದಂಗಳ ತಿಳಿಯಲು ಬೇಕು ದುಷ್ಟರ ಸಂಗವ ಬಿಡಲುಬೇಕು ಕೃಷ್ಣಾ ಕೇಶವ ಎನ್ನ ಬೇಕು ॥ ೩ ॥
Ashta madangala tiliyalu beku dushtara sangava bidalu beku krishnaa keshava enna beku ||

ವೇದ ಶಾಸ್ತ್ರವನೋದಲು ಬೇಕು ಭೇದಹಂಕಾರವ ನೀಗಲು ಬೇಕು ಮಾಧವ ಸ್ಮರಣೆಯೊಳಿರಬೇಕು ॥ ೪ ॥
veda shaastrava nodalu beku bhedahankaarava neegalu beku maadhava smaraneyolirabeku ||4||

ಶಾಂತಿ ಕ್ಷಮೆ ದಯೆ ಪಿಡಿಯಲು ಬೇಕು ಭ್ರಾಂತಿ ಕ್ರೋಧವ ಕಳೆಯಲು ಬೇಕು ಸಂತರ ಸಂಗದಿ ರತಿಯಿರಬೇಕು ॥ ೫ ॥
shaanti khame daye pidiyalu beku bhraanti krodhava kaleyalu beku santara sangadi ratiyirabeku ||
5||
ಗುರುವಿನ ಚರಣಕ್ಕೆರಗಲು ಬೇಕು ತರುಣೋಪಾಯವನರಿಯಲು ಬೇಕು ವಿರಕ್ತಿ ಮಾರ್ಗದಲಿರಬೇಕು ॥ ೬ ॥
guruvina charanakkeragalu beku tarunopaayavanariyalu beku virakti maargadalirabeku ||6||

ಬಂದದ್ದುಂಡು  ಸುಖಿಸಲು ಬೇಕು ನಿನ್ದಾಸ್ತುತಿಗಳ ತಾಳಲು ಬೇಕು ತಂದೆ ಪುರಂದರ ವಿಠಲನ ನೆನೆಯಲುಬೇಕು ॥ ೭ ॥
Bandaddundu sukhisalu beku nindaastutigala taalalu beku tande purandara vithalana neneyalu beku ||7
||