Wednesday 27 November 2013

Dasana maadiko enna swamee

ದಾಸನ ಮಾಡಿಕೋ ಎನ್ನ  ಸ್ವಾಮೀ । ಸಾಸಿರ ನಾಮದ ವೆಂಕಟರಮಣಾ ।।ಪಲ್ಲ॥
ದುರ್ಬುಧ್ಧಿಗಳನೆಲ್ಲ ಬಿಡಿಸೋ । ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ ।।
ಚರಣ ಸೇವೆ ಎನಗೆ ಕೊಡಿಸೋ ಅಭಯಕರ ಪುಷ್ಪವನೆನ್ನ ಶಿರದಲಿ ಮುಡಿಸೋ ।।೧।।
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ । ನಡಿಗೆರಗುವೆನಯ್ಯಾ ಅನುದಿನ  ಪಾಡಿ ।।
ಕಡೆಗಣ್ಣ ಲೇಕೆನ್ನ  ನೋಡಿ ಬಿಡುವೆ । ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ  ।।೨।।
ಮೊರೆಹೊಕ್ಕವರ ಕಾವ ಬಿರುದು ಪೊತ್ತವ ಎನ್ನ ಮರೆಯದೇ ರಕ್ಷಿಸಯ್ಯಾ ಪೊರೆದು ।।೩।।
 ದುರಿತಗಳೆಲ್ಲವ ತರಿದು ಸಿರಿ ಪುರಂದರ ವಿಠ್ಠ ಲ  ಎನನ್ನು ಪೊರೆದು ।।೪।।


taarakka bindigeya naaa neerighOguve taare biMdigeya

ತಾರಕ್ಕ ಬಿಂದಿಗೆಯ ನಾ ನೀರಿಗ್ಹೋಗುವೆ  ತಾರೆ ಬಿಂದಿಗೆಯ ॥ ಬಿಂದಿಗೆಯೊಡೆದರೆ ಒಂದೇ ಕಾಸು ತಾರೆ ಬಿಂದಿಗೆಯ ॥ಪ॥
ರಾಮ ನಾಮವೆಂಬೋ ರಸವುಳ್ಳ ನೀರಿಗೆ ತಾರೆ ಬಿಂದಿಗೆಯ ॥ ಕಾಮಿನಿಯರ ಕೂಡ ಏಕಾಂತ ವಾಡೇನು ತಾರೆ ಬಿಂದಿಗೆಯ ॥ ೧॥
ಗೋವಿಂದ ಎಂಬೋ ಗುಣವುಳ್ಳ  ನೀರಿಗೆ ತಾರೆ ಬಿಂದಿಗೆಯ।। ಆವಾದ ಪರಿಯಲ್ಲಿ ಅಮೃತದ ಪಾನಕ್ಕ ತಾರೆ ಬಿಂದಿಗೆಯ ॥ ೨॥ ಬಿಂದು ಮಾಧವನ ಘಟ್ಟಕ್ಕೆ ಹೋಗುವೆ ತಾರೆ ಬಿಂದಿಗೆಯ ॥ ಪುರಂದರ ವಿಠಲಗೆ  ಅಭಿಷೇಕ ಮಾಡುವೆ ತಾರೆ ಬಿಂದಿಗೆಯ ॥ 

innoo daya baarade daasana mele innoo daya baarade

ಇನ್ನೂ ದಯಬಾರದೆ ದಾಸನ ಮೇಲೆ ಇನ್ನೂ ದಯಾ ಬಾರದೆ  ॥ ಪ॥
ಪನ್ನಗಶಯನ ಪಾಲ್ಗಡಲೊಡೆಯನೆ ಕೃಷ್ಣ ॥ ಅ ಪ ॥
ನಾನಾ ದೇಶಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಪುಟ್ಟಿ ನಾನು ನನ್ನನ್ನು ಎಂಬ ನರಕದೊಳು ಬಿದ್ದು ನೀನೆ ಗತಿಯೆಂದು ನಂಬಿದ ದಾಸನ ಮೇಲೆ ॥೧ ॥
ಕಾಮಾದಿ ಷಡ್ವರ್ಗ  ಗಾಡಾಂಧಕಾರದಿ ಪಾಮರನಾಗಿ ಪಾತಕಿಯು।  ಮಾಮನೋಹರನೆ ಚಿತ್ತ ಜನಕನೆ ನಾಮವೆ ಗತಿಯೆಂದು ನಂಬಿದ ದಾಸನ ಮೇಲೆ ॥ ೨ ॥
ಮಾನಸ ವಾಚ ಕಾಯಾದಿ  ಮಾಳ್ಪ ಕರ್ಮವು। ದಾನ ವಾಂತಕ ನಿನ್ನ ದೀನ ನಲ್ತೆ  । ಏನು ಮಾಡಿದರೇನು ಪ್ರಾಣ  ನಿನ್ನನು ಸ್ವಾಮೀ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ ॥ ೩ ॥